Asianet suvarna news kannada live

  1. ಮನೆಯಲ್ಲಿದ್ದ ಚಪ್ಪಲಿ ಕಚ್ಚಿದ 4 ಬೀದಿ ನಾಯಿಗೆ ಸಂತಾನಹರಣ ಶಿಕ್ಷೆ ನೀಡಿದ ಮಾಜಿ ಮೇಯರ್!
  2. ಹೊಸ ಅವತಾರದಲ್ಲಿ ಹೋಂಡಾ ಡಿಯೋ ಸ್ಕೂಟರ್ ಬಿಡುಗಡೆ, ಬೆಲೆ 70 ಸಾವಿರ ಮಾತ್ರ!
  3. ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್‌ಗೆ ಲಂಡನ್‌ನ ಸೆಂಟ್ರಲ್ ಬ್ಯಾಕಿಂಗ್ ಗವರ್ನರ್ ಆಫ್ ದಿ ಇಯರ್ ಪ್ರಶಸ್ತಿ


Download: Asianet suvarna news kannada live
Size: 64.67 MB

ಮನೆಯಲ್ಲಿದ್ದ ಚಪ್ಪಲಿ ಕಚ್ಚಿದ 4 ಬೀದಿ ನಾಯಿಗೆ ಸಂತಾನಹರಣ ಶಿಕ್ಷೆ ನೀಡಿದ ಮಾಜಿ ಮೇಯರ್!

ಔರಂಗಬಾದ್(ಜೂ.14) ಮಾಜಿ ಮೇಯರ್ ತನ್ನ ಎಲ್ಲಾ ಎಲ್ಲಾ ಅಧಿಕಾರ ಬಳಿಸಿ ಬೀದಿ ನಾಯಿಗಳ ಮೇಲೆ ಸೇಡು ತೀರಿಸಿಕೊಂಡಿದ್ದಾರೆ. ಮನೆಯಲ್ಲಿಟ್ಟಿದ್ದ ಚಪ್ಪಲಿಯನ್ನು ಕಚ್ಚಿ ಎಳೆದೊಯ್ದ ಕಾರಣಕ್ಕೆ ಮೇಯರ್ ಸುತ್ತ ಮುತ್ತಲಿನ ಬೀದಿ ನಾಯಿಗಳನ್ನು ಹಿಡಿದು ಸಂತಾಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಮಹಾರಾಷ್ಟ್ರದ ಔರಂಗಬಾದ್ ಪಾಲಿಕೆಯ ಮಾಜಿ ಮೇಯರ್ ನಂದಕುಮಾರ್ ಗೊಡೆಲೆ ಈ ಕ್ರಮಕ್ಕೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ನಕ್ಷತ್ರವಾಡಿ ಏರಿಯಾದಲ್ಲಿರುವ ಮಾಜಿ ಮೇಯರ್ ನಂದಕುಮಾರ್ ಮನೆಯ ಗೇಟ್ ತೆರೆದಿತ್ತು. ರಾತ್ರಿ ವೇಳೆ ಬೀದಿ ನಾಯಿಗಳು ಮನೆಯ ವರಾಂಡ ಪ್ರವೇಶಿಸಿದೆ. ಮನೆಯ ಹೊರಗಡೆ ಇದ್ದ ನಂದಕುಮಾರ್ ಹಾಗೂ ಕುಟುಂಬಸ್ಥರ ಚಪ್ಪಲಿಯನ್ನು ಕಚ್ಚಿದೆ. ಇಷ್ಟೇ ಅಲ್ಲ ಕೆಲ ಚಪ್ಪಲಿಯನ್ನು ಎತ್ತಿಕೊಂಡು ಎಳೆದೊಯ್ದಿದೆ. ಬೆಳಗ್ಗೆ ಎದ್ದು ನೋಡಿದಾಗ ಒಂದೊಂದು ಚಪ್ಪಲಿ ಕಾಣೆಯಾಗಿದೆ. ಚಪ್ಪಲಿ ಕಾಣೆಯಾದ ಕಾರಣ ನಂದಕುಮಾರ್ ಆಕ್ರೋಶಗೊಂಡಿದ್ದಾರೆ. ಹತ್ತಿರದ ಸಿಸಿಟಿವಿ ಪರಿಶೀಲಿಸಲು ಸೂಚಿಸಿದ್ದಾರೆ. ಇದರಂತೆ ಸಿಸಿಟಿವಿ ಪರೀಶೀಲನೆ ವೇಳೆ ಬೀದಿ ನಾಯಿಗಳು ಮನೆಯತ್ತ ನುಗ್ಗಿ ಚಪ್ಪಲಿ ಕಚ್ಚಿ ಎಳೆದೊಯ್ದಿರುವುದು ಪತ್ತೆಯಾಗಿದೆ. ಇದು ಮಾಜಿ ಮೇಯರ್ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ. ತಮ್ಮ ಎಲ್ಲಾ ಅಧಿಕಾರ ಬಳಸಿ ಪಾಲಿಕೆಗೆ ಕರೆ ಮಾಡಿದ್ದಾರೆ. ನಂದಕುಮಾರ್ ಕರೆ ಬೆನ್ನಲ್ಲೇ ಮರುದಿನ ಬೆಳಗ್ಗೆ ನಾಯಿ ಹಿಡಿಯುವ ತಂಡ ನಕ್ಷತ್ರವಾಡಿ ಏರಿಯಾಗೆ ಹಾಜರಾಗಿದೆ. ನಾಯಿ ಹಿಡಿಯುವ ತಂಡ ಮಾಜಿ ಮೇಯ್ ನಂದಕುಮಾರ್ ಮನೆಯ ಸುತ್ತಮುತ್ತಲಿನ ಬೀದಿ ನಾಯಿಗಳನ್ನು ಹಿಡಿದಿದೆ. ಇದರಲ್ಲಿ ಚಪ್ಪಲಿ ಕಚ್ಚಿದ ನಾಲ್ಕು ನಾಯಿಗಳನ್ನು ಪತ್ತೆ ಹಚ್ಚಿ ಸಂತಾಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಮಾಹಿತಿ ಹೊರಬರುತ್ತಿದ್ದಂತೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಪಾಲಿಕೆ ಅದಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಸಾರ್ವಜನಿಕರಿಂದ ದೂರುಗಳು ಬಂದಿರುವ ಹಿನ್ನಲೆಯಲ್ಲಿ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸ ನೀಡಲಾಗುತ್ತದೆ. ಇದು ಸಾಮಾನ್ಯ ಪ್ರಕ್ರಿಯೆ ಎಂದಿದ್ದಾರೆ. ಇತ್ತ ಮಾಜಿ ಮೇಯರ್ ನಂದಕುಮಾರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಪರ ವಿರೋಧಗಳು ವ್ಯಕ್ತವಾಗ...

ಹೊಸ ಅವತಾರದಲ್ಲಿ ಹೋಂಡಾ ಡಿಯೋ ಸ್ಕೂಟರ್ ಬಿಡುಗಡೆ, ಬೆಲೆ 70 ಸಾವಿರ ಮಾತ್ರ!

ನವ ದೆಹಲಿ(ಜೂ.14) ಹೋಂಡಾ ಇದೀಗ ತನ್ನ ಅತ್ಯಂತ ಜನಪ್ರಿಯ ಸ್ಕೂಟರ್ ಡಿಯೋ ಹೊಸ ರೂಪದಲ್ಲಿ ಬಿಡುಗಡೆ ಮಾಡಿದೆ. ಹತ್ತು ಹಲವು ವಿಶೇಷತೆ, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಹೈಪರ್ಫಾಮೆನ್ಸ್ ಎಂಜಿನ್ ಸಾಮರ್ಥ್ಯ ಹೊಂದಿದೆ. ಡಿಯೋ ಸ್ಕೂಟರ್ ಭಾರತದ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸ್ಕೂಟರ್ ಅನ್ನೋ ಹೆಗ್ಗಳಿಗೆ ಪಾತ್ರವಾಗಿದೆ. ಇದೀಗ ಹೊಚ್ಚ ಹೊಸ ಡಿಯೋ ಸ್ಕೂಟರ್ ಬೆಲೆ 70,211 ರೂಪಾಯಿ ಬೆಲೆಯಲ್ಲಿ ಮಾರುಕಟ್ಟೆ ಪ್ರವೇಶಿಸಿದೆ. ಹೋಂಡಾ ಸ್ಮಾರ್ಟ್ ಕೀ ಸಿಸ್ಟಮ್ ಈ ಕೆಳಗಿನ ವೈಶಿಷ್ಟ್ಯಗಳನ್ನು ಒಳಗೊಂಡಿದೆ: ಆನ್ಸರ್ ಬ್ಯಾಕ್ ಸಿಸ್ಟಮ್ ಸ್ಮಾರ್ಟ್ ಕೀಯಲ್ಲಿ ವಾಹನವನ್ನು ಸುಲಭವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಹೋಂಡಾ ಸ್ಮಾರ್ಟ್ ಕೀಯಲ್ಲಿ ಆನ್ಸರ್ ಬ್ಯಾಕ್ ಬಟನ್ ಒತ್ತಿದಾಗ, ಎಲ್ಲಾ 4 ವಿಂಕರ್‌ಗಳು ಸ್ಕೂಟರ್ ಅನ್ನು ಪತ್ತೆಹಚ್ಚಲು ನೆರವು ನೀಡುತ್ತದೆ. ಸ್ಮಾರ್ಟ್ ಅನ್‌ಲಾಕ್: ಸ್ಮಾರ್ಟ್ ಕೀ ಸಿಸ್ಟಮ್ ಹೊಸ ತಂತ್ರಜ್ಞಾನದ ವೈಶಿಷ್ಟ್ಯವಾಗಿದ್ದು, ಭೌತಿಕ ಕೀಯನ್ನು ಬಳಸದೆಯೇ ವಾಹನವನ್ನು ಲಾಕ್ ಮಾಡಲು ಮತ್ತು ಅನ್‌ಲಾಕ್ ಮಾಡಲು ಸಾಧ್ಯವಾಗಿಸುತ್ತದೆ. ಸಕ್ರಿಯಗೊಳಿಸಿದ ನಂತರ 20 ಸೆಕೆಂಡುಗಳವರೆಗೆ ಯಾವುದೇ ಚಟುವಟಿಕೆಯನ್ನು ಸಿಸ್ಟಮ್ ಪತ್ತೆ ಮಾಡದಿದ್ದರೆ, ಸ್ಕೂಟರ್ ಸ್ವಯಂಚಾಲಿತವಾಗಿ ನಿಷ್ಕ್ರಿಯಗೊಳ್ಳುತ್ತದೆ. ಸ್ಮಾರ್ಟ್ ಸ್ಟಾರ್ಟ್: ಸ್ಮಾರ್ಟ್ ಕೀ ವಾಹನದ 2 ಮೀಟರ್ ವ್ಯಾಪ್ತಿಯಲ್ಲಿದ್ದರೆ, ಸವಾರನು ಲಾಕ್ ಮೋಡ್‌ನಲ್ಲಿ ನಾಬ್ ಅನ್ನು ಇಗ್ನಿಷನ್ ಸ್ಥಾನಕ್ಕೆ ತಿರುಗಿಸುವ ಮೂಲಕ ವಾಹನವನ್ನು ಸುಗಮವಾಗಿ ಸ್ಟಾರ್ಟ್ ಮಾಡಬಹುದು ಅಥವಾ ಆಫ್ ಮಾಡಬಹುದು. ಕೀ ಹೊರತೆಗೆಯದೆ ಸ್ಟಾರ್ಟ್ ಬಟನ್ ಅನ್ನು ಒತ್ತಿ ವಾಹನ ಚಾಲನೆ ಮಾಡಬಹುದು. ಸ್ಮಾರ್ಟ್ ಸೇಫ್: 2023 ಡಿಯೋ ಮ್ಯಾಪ್ ಮಾಡಲಾದ ಸ್ಮಾರ್ಟ್ ಇಸಿಯು ಅನ್ನು ಹೊಂದಿದೆ, ಇದು ಇಸಿಯು ಮತ್ತು ಸ್ಮಾರ್ಟ್ ಕೀ ನಡುವೆ ಎಲೆಕ್ಟ್ರಾನಿಕ್ ಹೊಂದಾಣಿಕೆ (ಐಡಿ) ಮೂಲಕ ಭದ್ರತಾ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ, ಆದ್ದರಿಂದ ವಾಹನ ಕಳ್ಳತನವನ್ನು ತಡೆಯುತ್ತದೆ. ಸ್ಮಾರ್ಟ್ ಕೀಲಿಯು ಇಮೊಬಿಲೈಸರ್ ವ್ಯವಸ್ಥೆಯನ್ನು ಹೊಂದಿದ್ದು ಅದು ನೋಂದಾಯಿತವಲ್ಲದ ಕೀಯನ್ನು ಎಂಜಿನ್ ಅನ್ನು ಪ್ರಾರಂಭಿಸುವುದನ್ನು ತಡೆಯುತ್ತದೆ. ಸ್ಮಾರ್ಟ್ ಕೀಯೊಂದಿಗೆ ಸುರಕ್ಷಿತ ಸ...

ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್‌ಗೆ ಲಂಡನ್‌ನ ಸೆಂಟ್ರಲ್ ಬ್ಯಾಕಿಂಗ್ ಗವರ್ನರ್ ಆಫ್ ದಿ ಇಯರ್ ಪ್ರಶಸ್ತಿ

ಲಂಡನ್(ಜೂ.14) ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ಗರಿ. ಹೌದು, ಇಡೀ ವಿಶ್ವವೇ ಆರ್ಥಿಕ ಹಿಂಜರಿತ, ಹಣದುಬ್ಬರ, ರಷ್ಯಾ ಉಕ್ರೇನ್ ಯುದ್ಧದ ಪರಿಣಾಮ, ಕೋವಿಡ್ ಪರಿಣಾಮ ಸೇರಿದಂತೆ ಹಲವು ಪ್ರತಿಕೂಲ ಪರಿಸ್ಥಿತಿ ಎದುರಿಸುತ್ತಿರುವ ಭಾರತ ಆರ್ಥಿಕತೆ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಯತ್ತ ಸಾಗಿತ್ತು. ಹಣದುಬ್ಬರ ನಿಯಂತ್ರಣದಲ್ಲಿತ್ತು. ಬ್ಯಾಂಕಿಂಗ್ ವ್ಯವಸ್ಥೆ ಸರಿಯಾದ ದಿಕ್ಕಿನಲ್ಲಿ ಸಾಗಿತ್ತು. ಇದರ ಹಿಂದಿನ ರೂವಾರಿ ಆರ್‌ಸಿಬಿ ಗವರ್ನರ್ ಶಕ್ತಿಕಾಂತ್ ದಾಸ್. ಇದೀಗ ಶಕ್ತಿಕಾಂತ್ ದಾಸ್ ಸಾಧನೆಯನ್ನು ಲಂಡನ್‌ನ ಅಂತಾರಾಷ್ಟ್ರೀಯ ಎಕಾನಾಮಿಕ್ ರಿಸರ್ಚ್ ಜರ್ನಲ್ ಪರಿಗಣಿಸಿ 2023ನೇ ಸಾಲಿನ ಸೆಂಟ್ರಲ್ ಬ್ಯಾಕಿಂಗ್‌ನ ಗವರ್ನರ್ ಆಫ್ ದಿ ಇಯರ್ ಪ್ರಶಸ್ತಿ ನೀಡಿ ಗೌರವಿಸಿದೆ. 2019ರ ಬಳಿಕ ಭಾರತ ಸೇರಿದಂತೆ ವಿಶ್ವವೇ ಹಲವು ಜಾಗತಿಕ ಸಮಸ್ಯೆಗಳನ್ನು ಎದುರಿಸಿತ್ತು. ಅದರಲ್ಲೂ ಪ್ರಮುಖವಾಗಿ ಕೋವಿಡ್ ಸಂದರ್ಭದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಗಳೇ ಹಳ್ಳ ಹಿಡಿದಿತ್ತು. ಆರ್ಥಿಕತೆ ಕುಸಿದಿತ್ತು. ದೇಶದ ಪ್ರಗತಿ ಕುಂಠಿತವಾಗಿತ್ತು. ಆರ್ಥಿಕ ಹಿಂಜರಿತ ಆತಂಕ ಆರಂಭಗೊಂಡಿತ್ತು. ಈ ಎಲ್ಲಾ ಸಮಸ್ಯೆಗಳನ್ನು ಶಕ್ತಿಕಾಂತ್ ದಾಸ್ ಸಮರ್ಥವಾಗಿ ನಿಭಾಯಿಸಿದ್ದರು. ಹೀಗಾಗಿ ಶಕ್ತಿಕಾಂತ್ ದಾಸ್‌ಗೆ ಈ ಸಾಲಿನ ಗವರ್ನರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ನೀಡಲಾಗಿದೆ. 2023ರ ಮಾರ್ಚ್ ತಿಂಗಳಲ್ಲಿ ಶಕ್ತಿಕಾಂತ ದಾಸ್ ಹೆಸರು ನಾಮನಿರ್ದೇಶನಗೊಂಡಿತ್ತು. ಪ್ರತಿಷ್ಠಿತ ಪ್ರಶಸ್ತಿ ಪಡೆದ ಭಾರತದ 2ನೇ ಆರ್‌ಬಿಐ ಗವರ್ನರ್ ಅನ್ನೋ ಹೆಗ್ಗಳಿಕೆಗೆ ಶಕ್ತಿಕಾಂತ ದಾಸ್ ಪಾತ್ರಾಗಿದ್ದಾರೆ. 2015ರಲ್ಲಿ ಅಂದಿನ ಆರ್‌ಸಿಬಿ ಗವರ್ನರ್ ರಘುರಾಮ್ ರಾಜನ್ ಈ ಗೌರವಕ್ಕೆ ಪಾತ್ರರಾಗಿದ್ದರು. ಇತ್ತೀಚೆಗೆ ಶಕ್ತಿಕಾಂತ ದಾಸ್ ಬಡ್ಡಿದರದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದರು. ಸತತ ಎರಡನೇ ಬಾರಿಯೂ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಂದರೆ ಸಾಲದ ಮೇಲಿನ ಬಡ್ಡಿ ದರಗಳು ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರಗಳಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆಯಾಗುವುದಿಲ್ಲ. ರೆಪೋ ದರವನ್ನು (ಬ್ಯಾಂಕುಗಳಿಗೆ ಆರ್‌ಬಿಐ ನೀಡುವ ಸಾಲದ ಮೇಲಿನ ಬಡ್ಡಿ ದರ) ಈ ಹಿಂದಿನಂತೆ ಶೇ.6.5ರಲ್ಲೇ ಮುಂದುವರೆಸಲಾಗಿದೆ. ಹೀಗಾಗಿ ಸಾಲ ಮತ್ತು ಠೇ...