ಪ್ರಜಾವಾಣಿ ಚುರುಮುರಿ

  1. ಆವಧಿ ಮ್ಯಾಗ್


Download: ಪ್ರಜಾವಾಣಿ ಚುರುಮುರಿ
Size: 41.67 MB

ಚುರುಮುರಿ

‘ಪುರುಷರಿಗೆ ಮೀಸಲಾದ ಸೀಟುಗಳಲ್ಲಿ ಹೆಂಗಸರು ಕೂರುವಂತಿಲ್ಲ...’ ಬಸ್ಸಿನಲ್ಲಿ ಕಂಡಕ್ಟರ್ ಅನೌನ್ಸ್ ಮಾಡಿದರು. ಪುರುಷರಿಗೆ ಎಲ್ಲೂ ಇಲ್ಲದ ಮೀಸಲಾತಿ ಬಸ್ಸಿನಲ್ಲಿದೆ ಎಂದು ಶಂಕ್ರಿ ಆನಂದಪಟ್ಟ. ‘ಹೆಂಗಸೊಬ್ಬಳು ಗಂಡಸರ ಸೀಟಿನಲ್ಲಿ ಕುಳಿತಿದ್ದಾಳೆ, ಅವಳನ್ನು ಏಳಿಸ್ರೀ, ನಿಮ್ಮ ಟಿಕೆಟ್ ಲೆಕ್ಕದಲ್ಲಿ ನಾನು ಅಲ್ಲಿ ಕೂರ್ತೀನಿ’ ಸುಮಿ ಗಂಡನಿಗೆ ಪಿಸುಗುಟ್ಟಿದಳು. ‘ಮೇಡಂ, ಇದು ಗಂಡಸರ ಸೀಟು’ ಅಂದ ಶಂಕ್ರಿ. ‘ಬಸ್ಸಿನ ಸೀಟಿಗೆ ಹೆಣ್ಣು-ಗಂಡೆಂಬ ಲಿಂಗಭೇದವಿಲ್ಲ...’ ಅಂದಳು. ‘ಹಾಗಲ್ಲಾ, ಟಿಕೆಟ್ ಖರೀದಿಸಿದ ಪುರುಷರ ಸೀಟು ಇದು’. ಪಕ್ಕದಲ್ಲಿದ್ದ ಗಂಡಸು, ‘ರೀ ಸ್ವಾಮಿ, ಆ ಸೀಟಿಗೆ ನಾನೇ ಟಿಕೆಟ್ ತಗೊಂಡು ಹೆಂಡ್ತಿಯನ್ನು ಕೂರಿಸಿ ನಾನು ಸ್ಟ್ಯಾಂಡಿಂಗ್‍ನಲ್ಲಿದ್ದೀನಿ’ ಅಂದ. ಇನ್ನೊಬ್ಬ ಮಹಿಳೆ ಬಳಿ ಹೋಗಿ, ‘ಮೇಡಂ, ನಿಮ್ಮ ಗಂಡನೂ ಸ್ಟ್ಯಾಂಡಿಂಗ್‍ನಲ್ಲಿದ್ದಾರಾ?’ ಶಂಕ್ರಿ ಕೇಳಿದ. ‘ಇಲ್ಲ, ಮನೇಲಿದ್ದಾರೆ’. ‘ಹಾಗಾದ್ರೆ ಎದ್ದೇಳಿ, ಇದು ಗಂಡಸರ ಸೀಟು’ ಅಂದಳು ಸುಮಿ. ‘ಹೌದು ಮೇಡಂ, ಈ ಸೀಟಿಗೆ ಗಂಡಸರು ಟಿಕೆಟ್ ಕೊಂಡಿದ್ದಾರೆ’ ಎಂದರು ಕಂಡಕ್ಟರ್. ‘ಸೀಟು ಬಿಡಲ್ಲ, ನನಗೂ ಟಿಕೆಟ್ ಕೊಡಿ...’ ಪರ್ಸಿನಿಂದ ದುಡ್ಡು ತೆಗೆದಳು. ‘ಕಂಡಕ್ಟರೇ, ಮಹಿಳೆಯರಿಗೆ ಟಿಕೆಟ್ ಕೊಡುವುದು ನಿಯಮಬಾಹಿರ...’ ಸುಮಿ ಎಚ್ಚರಿಸಿದಳು. ‘ಮುಂದಿನ ಸ್ಟಾಪಿನಲ್ಲಿ ಈ ಅಜ್ಜಿ ಇಳಿಯುತ್ತಾರೆ, ಸೀಟು ಖಾಲಿಯಾಗುತ್ತೆ’ ಎಂದರು ಕಂಡಕ್ಟರ್. ‘ಈ ಸೀಟು ನನ್ನದು, ಕೈಲಾಗದ ಅಜ್ಜಿ ಅಂತ ಬಿಟ್ಟುಕೊಟ್ಟಿದ್ದೇನೆ’ ಪಕ್ಕದವನು ಅಡ್ಡ ಬಂದ. ‘ನನ್ನ ಹೆಂಡ್ತೀನ ಕೂರಿಸಬೇಕು, ಸೀಟು ಬಿಟ್ಟುಕೊಡಿ, ಟಿಕೇಟಿನ ಎರಡರಷ್ಟು ದುಡ್ಡು ಕೊಡ್ತೀನಿ’ ಶಂಕ್ರಿ ಆಮಿಷವೊಡ್ಡಿದ. ‘ನಾನು ಬ್ಲ್ಯಾಕ್ ಟಿಕೆಟ್ ಮಾರುವವ ನೇನ್ರೀ?...’ ಎಂದು ಕೂಗಾಡಿದ. ಶಂಕ್ರಿ ತೆಪ್ಪಗಾದ. ‘ಹೆಂಡ್ತಿಗೊಂದು ಸೀಟಿನ ವ್ಯವಸ್ಥೆ ಮಾಡಲಾಗಲಿಲ್ಲ, ಛೇ, ನೀವೆಂಥಾ ಗಂಡ...’ ಶಂಕ್ರಿಗೆ ಸುಮಿ ತಿವಿದು ಹೇಳಿದಳು.

ಕಲಬುರಗಿ

ಕಲಬುರಗಿ: ‘ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಸಂಘದ ಕಾರ್ಯದರ್ಶಿಯಾಗಿದ್ದ ಭೀಮಾಶಂಕರ ತೆಗ್ಗೆಳ್ಳಿ ಅವರನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡಿದ್ದೇಕೆ’ ಎಂದು ಗುತ್ತಿಗೆದಾರರಾಗಿರುವ ಎಂ.ಎಸ್. ಪಾಟೀಲ ಪ್ರಶ್ನಿಸಿದ್ದಾರೆ.

ಆವಧಿ ಮ್ಯಾಗ್

ಕನ್ನಡ ಪ್ರಕಾಶನ ರಂಗಕ್ಕೆ ಕಾರ್ಪೊರೇಟ್ ಸ್ಪರ್ಶ ನೀಡುವ ಹಂಬಲ 'ವೀರಲೋಕ'ದ್ದು. ವೀರಕಪುತ್ರ ಶ್ರೀನಿವಾಸ್ ಅವರ ಕನಸಿನ ಕೂಸು. ಕನ್ನಡ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಕಾಲ್ ಸೆಂಟರ್ ಆರಂಭಿಸಿರುವ ವೀರ ಲೋಕ ತಾನೇ ಸಾಕಷ್ಟು ಕೃತಿಗಳನ್ನು ಪ್ರಕಟಿಸುತ್ತಾ ಬಂದಿದೆ. 'ಬಿಬಿಸಿ ಪುಸ್ತಕ ಮಳಿಗೆ'ಯನ್ನು ಹೊಂದಿದೆ. ಈಗ... ಎದೆ ಝಲ್ಲೆನ್ನಿಸುವ ರೋಚಕ ‘ಸುಪಾರಿ’ Jun 6, 2023 | ಜಿ ಪಿ ಬಸವರಾಜು ಅವರ ಕವಿತೆಗಳು ನನ್ನನ್ನು ಎಷ್ಟು ಆಕರ್ಷಿಸಿದ್ದವೋ ಅಷ್ಟೇ ಆಕರ್ಷಿಸಿದ್ದು ಅವರ ಚಿಂತನೆಗಳು. 'ಬರಹಗಾರ ನೀನು ಯಾರ ಪರ?' ಎಂದು ನಿಜಕ್ಕೂ ಆತಂಕದಿಂದ ಕೇಳಬೇಕಾದ ದಿನಗಳು ಇವು. ಬಹುಷಃ ಜಿ ಪಿ ಬಸವರಾಜು ಅವರನ್ನು ಬಿಟ್ಟು. ಅವರ ಸಮಾಜಮುಖಿ ಚಿಂತನೆಗಳು ಅವರ ಬರಹದ ಆರಂಭದ ದಿನಗಳಿಂದ ಇಲ್ಲಿಯವರೆಗೂ ಪ್ರಶ್ನಾತೀತವಾಗಿಯೇ ಉಳಿದಿವೆ. ನಾನು ಬಸವರಾಜು ಅವರನ್ನು ಓದಿ ಬೆಳೆದವನು. ಅವರ ಕವಿತೆ, ಪ್ರವಾಸ ಕಥನಕ್ಕೆ ಮಾರು ಹೋದವನು. ಅವರ ಕೈಕುಲುಕಿದ್ದು ನಾನು ಇನ್ನೂ ಕಾಲೇಜು ಓದುತ್ತಿದ್ದ ದಿನಗಳಲ್ಲಿ ಮಂಗಳೂರಿಗೆ ಸಂಕಿರಣಕ್ಕೆಂದು ಹೋದಾಗ. ಮಂಗಳೂರಿನಲ್ಲಿ ಕೊಣಾಜೆಯಿಂದ ಬೈಕ್ ಏರಿ ಕಡಲನ್ನು ಬಗಲಲ್ಲಿ ಇಟ್ಟುಕೊಂಡು ಸಾಗುತ್ತಿದ್ದ ಬಸವರಾಜು ಅವರ ಚಿತ್ರ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ನಂತರ 'ಪ್ರಜಾವಾಣಿ'ಯ ಅಂಗಳದಲ್ಲೇ ನಾವಿಬ್ಬರೂ...